ಆಡುಗಳಲ್ಲಿ ಪೋಷಣೆ ಮತ್ತು ನಿರ್ವಹಣೆ
ನವಜಾತ ಮರಿಗಳ ಆರೈಕೆ
ಶಕ್ತಿಯುತ ಮತ್ತು ಆರೋಗ್ಯವಂತ ಆಡುಗಳ ಉತ್ಪಾದನೆಯಲ್ಲಿ ಮರಿಗಳ ನಿರ್ವಹಣೆಯು ಮುಖ್ಯ ಅಂಶವಾಗಿದೆ ದಷ್ಟಪುಷ್ಟವಾಗಿ ಬೆಳೆದ ಮರಿಗಳು ರೋಗ ರುಜಿನಗಳಿಗೆ ಬಲಿಯಾಗುವಿವುದಿಲ್ಲ.
ಮರಿಗಳಿಗೆ ಮೂರು ತಿಂಗಳಾಗುವಾಗ ಮೆಲಕು ಚೀಲವು ತನ್ನ ಕಾರ್ಯವನ್ನು ಪ್ರಾರಂಭಿಸಿರುತ್ತದೆ.
ಈ ವಯಸ್ಸಿನಲ್ಲಿ ಮೇವನ್ನು ಕೊಡಲಾರಂಭಿಸಬೇಕು.
ತದನಂತರ, ಮರಿಗಳನ್ನು ತಾಯಿಯಿಂದ ಬೇರ್ಪಡಿಸಬಹುದು.
ಅಲ್ಲಿವರೆಗೆ ಜಾಗರೂಕತೆಯಿಂದ ನಿರ್ವಹಣೆ ಮಾಡುವದರಿಂದ ಆಡುಮರಿಗಳ ಮರಣದ ಪ್ರಮಾಣ ತಗ್ಗಿ ಉದ್ಯಮ ಲಾಭದಾಯಕವಾಗುತ್ತದೆ.
-
ಮರಿ ಹಾಕಿದ ಮೇಲೆ ಆಡು ಮರಿಗಳನ್ನು ನೆಕ್ಕಿ ಸ್ವಚ್ಚಗೊಳಿಸುತ್ತದೆ. ಹಾಗೆ ಮಾಡದೇ ಇದ್ದ ಪಕ್ಷದಲ್ಲಿ ಮರಿಗಳನ್ನು ಒಣ ಹಾಗೂ ಸ್ವಚ್ಛ ಬಟ್ಟೆಯಿಂದ ಒರೆಸಬೇಕು.
ಮರಿಗಳು ಜನಿಸಿದ ಕೂಡಲೆ ಮೂಗು, ಬಾಯಿ ಮತ್ತು ಗಂಟಿಲಿನಲ್ಲಿ ಸೇರಿರುವ ಶ್ಲೇಷ್ಮದ್ರವವನ್ನು ತೆಗೆದು ಸ್ವಚ್ಛಗೊಳಿಸಿ ಉಸಿರಾಟ್ಟಕ್ಕೆ ಅವಕಾಶ ಮಾಡಬೇಕು.
-
ಮೂಗಿನ ಸುತ್ತಲಿರುವ ಲೋಳೆಯನ್ನು ಸಹ ಚೆನ್ನಾಗಿ ತೆಗೆಯಬೇಕು
-
ಹೊಕ್ಕಳ ಬಳ್ಳಿಯನ್ನು ಮೂರು ಅಂಗುಲದಷ್ಟು ಬಿಟ್ಟು ಕತ್ತರಿಸಿ ತುದಿಗೆ ಟಿಂಚರ್ ಅಯೋಡಿನ್ ಲೇಪಿಸಬೇಕು.
ಹೊಕ್ಕಳ ಗಾಯವು ಒಣಗುವವರೆಗೆ ಪ್ರತಿ ದಿನವೂ ಗಮನಿಸಬೇಕು.
-
ಹುಟ್ಟಿದ ಪ್ರತಿಯೊಂದು ಮರಿಯ ತೂಕವನ್ನು ದಾಖಲಿಸಬೇಕು.
-
ಮರಿಗಳಿಗೆ ಜನ್ಮವಿತ್ತ ನಂತರ ತಾಯಿಯು ಮೃತ ಪಟ್ಟರೆ ಅಥವಾ ಅವಳಿ ತ್ರಿವಳಿಗಳಿಗೆ ಜನ್ಮವಿತ್ತು ಮರಿಗಳಿಗೆ ಸಾಕಾಗುವಷ್ಟು ಹಾಲನ್ನು ಉತ್ಪಾದಿಸದಿದ್ದರೆ
ಇತರ ಆಡುಗಳ ಹಾಲನ್ನು ಕರೆದು ಕುಡಿಸಬೇಕು.
-
ಗಿಣ್ಣದ ಹಾಲು: ಹುಟ್ಟಿದ ನಂತರ 15 ನಿಮಿಷದಿಂದ ಅರ್ಧ ಘಂಟೆಯೊಳಗಾಗಿ ಗಿಣ್ಣದ ಹಾಲನ್ನು ಕುಡಿಸಲು ಮರೆಯಬಾರದು.
ಗಿಣ್ಣು ಹಾಲನ್ನು ಕುಡಿಸಲು ವಿಳಂಬ ಮಾಡಿದಷ್ಟೂ ಸಣ್ಣ ಕರುಳಿನಲ್ಲಿ ಹಾಲಿನಲ್ಲಿರುವ ಪ್ರತಿವಿಷವಸ್ತುಗಳನ್ನು ಹೀರಿಕೊಳ್ಳುವ ಪ್ರಮಾಣ ಕಡಿಮೆಯಾಗುತ್ತದೆ.
ಮೊದಲ 5 ದಿನಗಳವರೆಗೆ ಪ್ರತಿ ದಿನವೂ 3 ರಿಂದ 5 ಬಾರಿ ಗಿಣ್ಣು ಹಾಲನ್ನು ಕುಡಿಸುವುದು ಸೂಕ್ತ.
ಗಿಣ್ಣು ಹಾಲು ತಾಯಿಯಿಂದ ಮರಿಗಳಿಗೆ ರೋಗ ನಿರೋಧಕ ಶಕ್ತಿಯನ್ನು ವರ್ಗಾಯಿಸುತ್ತದೆ.
-
ಮರಿಗಳ ಆಹಾರದಲ್ಲಿ ಶೇ. 14 ರಿಂದ 16 ರಷ್ಟು ಸಸಾರಜನಕವಿರಬೇಕು.
-
ಮರಿಗಳನ್ನು ತಾಯಿಯಿಂದ ಬೇರ್ಪಡಿಸಿದ ನಂತರ (03 ತಿಂಗಳು) ಕೊಬ್ಬಿಸಲು ಅಥವಾ ತಳಿ ಸಂವರ್ಧನೆಗೆ ಬಳಸಲಿಚ್ಚಿಸದ ಗಂಡು ಮರಿಗಳನ್ನು ಕಸಿ ಮಾಡಿಸಬೇಕು.
ಕಸಿ ಮಾಡಿದ ಮರಿಗಳಲ್ಲಿ ಬೆಳೆವಣಿಗೆಯು ತೀವ್ರ ಗತಿಯಲ್ಲಿರುತ್ತದೆ.
ಕಸಿ ಮಾಡದಿರುವ ಗಂಡು ಮರಿಗಳನ್ನು 4 ತಿಂಗಳುಗಳ ವಯಸ್ಸಿನಲ್ಲಿ ಹೆಣ್ಣು ಮರಿಗಳ ಗುಂಪಿನಿAದ ಬೇರ್ಪಡಿಸಿ ಪಾಲನೆ ಮಾಡಬೇಕು.
ಮರಿಗಳ ಪೋಷಣೆ :
ಮರಿಗಳು ಹುಟ್ಟಿದಾಗ 1.6 ರಿಂದ ₹ ಕಿ.ಗ್ರಾಂ ದೈಹಿಕ ತೂಕವನ್ನು ಹೊಂದಿರುತ್ತವೆ.
ಮರಿಗಳ ತ್ವರಿತ ಬೆಳೆವಣಿಗೆಗೆ ಅಗತ್ಯವಿರುವಷ್ಟು ತಾಯಿಯ ಹಾಲು ಮತ್ತು ಸಮತೋಲನ ಆಹಾರವನ್ನು ಒದಗಿಸವುದು ಬಹಳ ಮುಖ್ಯ.
ಮರಿಗಳಿಗೆ ನೀಡಬೇಕಾದ ಹಾಲು, ದಾಣಿ ಮಿಶ್ರಣ ಮತ್ತು ಹುಲ್ಲು ಕೊಡುವ ಪ್ರಮಾಣವನ್ನು ಕೋಷ್ಟಕದಲ್ಲಿ ವಿವರಿಸಲಾಗಿದೆ.
ಮರಿಗಳಿಗೆ ಹಾಲು, ದಾಣಿ ಮಿಶ್ರಣ ಮತ್ತು ಹುಲ್ಲು ಕೊಡುವ ಪ್ರಮಾಣ
| ಆಡಿನ ವಯಸ್ಸು |
ಪ್ರತಿ ದಿನದ ಆಹಾರದ ಪ್ರಮಾಣ (ಪ್ರತಿ ಮರಿಗೆ) |
| ಹಾಲು (ಮಿ.ಲೀ) |
ದಾಣಿ ಮಿಶ್ರಣ (ಗ್ರಾಂ) |
ಹಸಿರು ಹುಲ್ಲು (ಗ್ರಾಂ) |
| ಹುಟ್ಟಿದ 5 ದಿನಗಳವರೆಗೆ |
ಗಿಣ್ಣು ಹಾಲು |
- |
- |
| 5-30 ದಿನಗಳವರೆಗೆ |
300-500 |
ಸಣ್ಣ ಪ್ರಮಾಣದಲ್ಲಿ |
ಸಣ್ಣ ಪ್ರಮಾಣದಲ್ಲಿ |
| 30-60 ದಿನಗಳವರೆಗೆ |
400-500 |
50-100 |
ಸಣ್ಣ ಪ್ರಮಾಣದಲ್ಲಿ |
| 60-90 ದಿನಗಳವರೆಗೆ |
ಹಾಲುಣಿಸುವ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡುತ್ತ ೩ ತಿಂಗಳ ಕೊನೆಗೆ ಪೂರ್ತಿ ನಿಲ್ಲಿಸಬೇಕು
|
100-150 |
250 |
| 90-120 ದಿನಗಳವರೆಗೆ |
- |
200-250 |
250 |
| 5-6- ತಿಂಗಳವರೆಗೆ |
_ |
250-300 |
750 |
ಮರಿಗಳ ಸಮತೋಲನ ಆಹಾರ:
ಮರಿಗಳ ಮಾದರಿ ಆಹಾರ ಮಿಶ್ರಣವನ್ನು ರೈತರು ತಮ್ಮಲ್ಲಿರುವ ಕಚ್ಚಾವಸ್ತುಗಳನ್ನು ಕೋಷ್ಟಕದಲ್ಲಿ ತಿಳಿಸಿದ ಪ್ರಮಾಣದಲ್ಲಿ ಬೆರೆಸಿ ತಯಾರಿಸಿ ಕೊಡಬಹುದು.
ಮರಿಗಳ ಮಾದರಿ ಆಹಾರ ಮಿಶ್ರಣ – 100ಕಿ.ಗ್ರಾ.
| ಪದಾರ್ಥ |
ಪ್ರಮಾಣ |
| ಮುಸುಕಿನ ಜೋಳದ ನುಚ್ಚು |
29 |
| ತೋಕ ಗೋಧಿ/ಓಟ್ಸ |
29 |
| ಗೋಧಿ ಬೂಸ |
29 |
| ಸೋಯಾ ಕಾಳಿನ ಪುಡಿ |
11.50 |
| ಲವಣ ಮಿಶ್ರಣ |
0.50 |
| ಡೈ ಕ್ಯಾಲ್ಸಿಯಂ ಫಾಸ್ಫೇಟ್ |
0.50 |
| ಜೀವಸತ್ವ ಎ, ಡಿ, ಇ ಮಿಶ್ರಣ |
0.50 |
- ಮರಿಗಳ ಆಹಾರದಲ್ಲಿ ಶೇ. 12 ರಿಂದ 14 ರಷ್ಟು ಜೀರ್ಣವಾಗಬಲ್ಲ ಕಚ್ಚಾ ಸಸಾರಜನಕವಿರತಕ್ಕದ್ದು. ಒಟ್ಟು ಜೀರ್ಣವಾಗುವಂತಹ ಪೋಷಕಾಂಶಗಳು ಶೇ. 70 ರಿಂದ 78 ರಷ್ಟಿರಬೇಕು.
- ಯೂರಿಯಾವನ್ನು ಮರಿಗಳ ಆಹಾರದಲ್ಲಿ ಸೇರಿಸಬಾರದು.
- ಮರಿಗಳಿಗೆ ಒಂದು ತಿಂಗಳ ನಂತರ ಸುಮಾರು 50 ಗ್ರಾಂ. ದಿಂದ ಆರಂಬಿಸಿ ಹಂತ ಹಂತವಾಗಿ ಹೆಚ್ಚಿಸಿ ನೀಡಬೇಕು.
ಆಡುಗಳಲ್ಲಿ ಲಸಿಕೆ ಹಾಗೂ ಜಂತುನಾಶಕ ಔಷಧೋಪಚಾರದ ವೇಳಾಪಟ್ಟಿ
| ಕ್ರ.ಸಂ. |
ರೋಗ |
ಲಸಿಕೆ ಹಾಕುವ ವಯಸ್ಸು |
ಲಸಿಕೆ ಹಾಕುವ ಸಮಯ |
| 1. |
ಕರುಳು ಬೇನೆ |
4 ತಿಂಗಳು ಮೇಲ್ಪಟ್ಟು |
ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಜುಲೈ ತಿಂಗಳಲ್ಲಿ |
| 2. |
ಕಾಲು ಬಾಯಿ ರೋಗ (ಖುರಖತ್) |
4-6 ತಿಂಗಳು ಮೇಲ್ಪಟ್ಟು |
ವರ್ಷಕ್ಕೆ ಎರಡು ಬಾರಿ ಫೆಬ್ರವರಿ-ಮಾರ್ಚ್ & ಅಗಷ್ಟ್-ಸಪ್ಟೆಂಬರ್ ತಿಂಗಳಲ್ಲಿ |
| 3. |
ಚಪ್ಪೆ ಬೇನೆ |
4-6 ತಿಂಗಳು ಮೇಲ್ಪಟ್ಟು |
ವರ್ಷಕ್ಕೊಮ್ಮೆ ಮಾರ್ಚ್ – ಏಪ್ರಿಲ್ ತಿಂಗಳಲ್ಲಿ |
| 4. |
ಗAಟಲು ಬೇನೆ |
4-6 ತಿಂಗಳು ಮೇಲ್ಪಟ್ಟು |
ವರ್ಷಕ್ಕೊಮ್ಮೆ ಏಪ್ರಿಲ್ – ಮೇ ತಿಂಗಳಲ್ಲಿ |
| 5. |
ನೇರಡಿ ರೋಗ |
6 ತಿಂಗಳು ಮೇಲ್ಪಟ್ಟು |
ವರ್ಷಕ್ಕೊಮ್ಮೆ ಏಪ್ರಿಲ್ – ಮೇ ತಿಂಗಳಲ್ಲಿ (ರೋಗ ಕಂಡುಬAದ ಪ್ರದೇಶದಲ್ಲಿ) |
| 6. |
ಪಿ.ಪಿ.ಆರ್ |
4 ತಿಂಗಳು ಮೇಲ್ಪಟ್ಟು |
ವರ್ಷಕ್ಕೊಮ್ಮೆ ಜೂನ್ – ಜುಲೈ ತಿಂಗಳಲ್ಲಿ |
| 7. |
ನೀಲಿ ನಾಲಿಗೆ ರೋಗ |
4-6 ತಿಂಗಳು ಮೇಲ್ಪಟ್ಟು |
ವರ್ಷಕ್ಕೊಮ್ಮೆ ಅಗಷ್ಟ್ ತಿಂಗಳಲ್ಲಿ |
| 8. |
ಸಿಡುಬು ರೋಗ |
4 ತಿಂಗಳು ಮೇಲ್ಪಟ್ಟು |
ವರ್ಷಕ್ಕೊಮ್ಮೆ ಡಿಸೆಂಬರ್ ತಿಂಗಳಲ್ಲಿ |
ಬೆಳೆಯುವ ಮರಿಗಳ ಆರೈಕೆ ಹಾಗೂ ಪೋಷಣೆ
ಆಡುಗಳ ಮಂದೆಯಲ್ಲಿನ ಮರಿಗಳನ್ನು ಪ್ರತ್ಯೇಕಿಸಿ (ವಿಶೇಷವಾಗಿ ಗಂಡುಮರಿಗಳು) ಅವುಗಳನ್ನು ಕೊಬ್ಬಿಸಿ ಮಾರುವ ಪದ್ದತಿಯನ್ನು ರೈತರು ಕೈಗೊಳ್ಳುತ್ತಾರೆ.
ಆ ರೀತಿ ಪ್ರತ್ಯೇಕಿಸಿದ ಮರಿಗಳ ವಿಶೇಷ ಪೋಷಣೆ ನೀಡಿದಾಗ ಮಾತ್ರ ಅವುಗಳು ಕಡಿಮೆ ಸಮಯದಲ್ಲಿ ಹೆಚ್ಚು ಕೊಬ್ಬಿ ಉತ್ತಮ ಲಾಭದಾಯಕವಾಗುತ್ತದೆ.
- ಗಂಡು ಮರಿಗಳನ್ನು 2 ರಿಂದ 3 ತಿಂಗಳ ವಯಸ್ಸಿನಲ್ಲಿ ಕಸಿ ಮಾಡಿ ಕೊಬ್ಬಿಸಬಹುದು.
- ಬೆಳೆಯುವ ಮರಿಗಳಿಗೆ ಪೂರೈಸುವ ಮೇವಿನಲ್ಲಿ ಶೇ. 20 ರಿಂದ 25 ರಷ್ಟು ಶುಷ್ಕಾಂಶವಿದ್ದರೆ ಒಳ್ಳೆಯದು
- ಮಾಂಸಕ್ಕಾಗಿ ಮಾರಾಟ ಮಾಡಲು ಅಣಿಗೊಳಿಸುತ್ತಿರುವ ಆಡುಗಳ ಆಹಾರದಲ್ಲಿ ಕಚ್ಚಾ ಸಸಾರಜನಕದ ಪ್ರಮಾಣವನ್ನು ಶೇ. 5 ರಿಂದ 6ಕ್ಕೆ ಸೀಮಿತಗೊಸಬೇಕು.
- ಕರಡು ಮೇವವನ್ನು ಅಧಿಕವಾಗಿ ಒದಗಿಸಿದರೆ (ಶೇ.30 ರಿಂದ 40) ದೇಹದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ.
- ಬೆಳೆಯುವ ಮರಿಗಳಿಗೆ ನೀಡುವ ದಾಣಿ ಮಿಶ್ರಣವನ್ನು ರೈತರು ಕೆಳಕಂಡ ಕೋಷ್ಟಕದಲ್ಲಿ ತಿಳಿಸಿದಂತೆ ತಯಾರಿಸಿ ನೀಡಬಹುದು.
ಬೆಳೆಯು ಮರಿಗಳ ಮಾದರಿ ಆಹಾರ – 100ಕಿ.ಗ್ರಾ
| ಪದಾರ್ಥ |
ಪ್ರಮಾಣ |
| ಮುಸುಕಿನ ಜೋಳದ ನುಚ್ಚು | 50 |
| ಕುದರೆಮಂತೆ ಸೊಪ್ಪಿನ ಪುಡಿ | 15 |
| ಓಟ್ಸ | 17 |
| ಸೋಯಾ ಅವರೆ ಪುಡಿ | 12 |
| ಕಾಕಂಬಿ | 3 |
| ಲವಣ ಮಿಶ್ರಣ | 1 |
| ಜೀವಸತ್ವ ಎ,ಡಿ, ಇ ಮಿಶ್ರಣ | 1 |
| ಡೈ ಕ್ಯಾಲ್ಸಿಯಂ ಫಾಸ್ಫೇಟ್ | 0.50 |
| ಸುಣ್ಣದ ಕಲ್ಲು | 0.50 |
ಗರ್ಭ ಧರಿಸಿದ ಆಡಿನ ಜೋಪಾನ
ಗರ್ಭದರಿಸಿದ ಮೇಕೆಗಳ ಪಾಲನೆ ಹಾಗೂ ಪೋಷಣೆಗೆ ಸಂಬಂದಿಸಿದಂತೆ ಈ ಕೆಳಕಂಡ ಪ್ರಮುಖ ಅಂಶಗಳನ್ನು ಗಮನದಲ್ಲಿಡಬೇಕು.
- ಗರ್ಭ ಧರಿಸಿದ ಆಡು 150-155 ದಿನಗಳಲ್ಲಿ ಮರಿ ಹಾಕುತ್ತದೆ.
- ಮರಿ ಹಾಕುವ ಪೂರ್ವದಲ್ಲಿ ಪ್ರತ್ಯೇಕ ಸ್ಥಳದಲ್ಲಿ ಹುಲ್ಲಿನ ಹಾಸಿಗೆಯ ಮೇಲೆ ಇರಿಸಬೇಕು.
- ಪೌಷ್ಟಿಕ ಆಹಾರ ಮತ್ತು ಸ್ವಚ್ಚವಾದ ನೀರನ್ನು ಒದಗಿಸಬೇಕು.
- ಪ್ರಸವದ ದಿನವು ಹತ್ತಿರವಾಗುತ್ತಿದ್ದಂತೆ ಗಬ್ಬದ ಆಡು ಸಾಮಾನ್ಯವಾಗಿ ಹಿಂಡಿನಲ್ಲಿ ಸ್ವಯಂ ಇತರ ಆಡುಗಳಿಂದ ದೂರವಿರುತ್ತದೆ. ಕೆಚ್ಚಲಿನಲ್ಲಿ ಹಾಲು ತುಂಬಿಕೊಳ್ಳಲಾರಂಭಿಸಿ ಗಾತ್ರದಲ್ಲಿ ದೊಡ್ಡದಾಗುತ್ತದೆ. ಬಾಲದ ಬುಡದಲ್ಲಿ ಎರಡೂ ಬದಿಗಳಲ್ಲಿ ಗುಳಿ ಬೀಳುತ್ತದೆ. ಮರಿಗಳನ್ನೀಯಲು ಎರಡು ದಿನಗಳಿರುವಾಗ ಮಾನಸಿಕ ಗೊಂದಲ, ಕಾಲಿನಿಂದ ನೆಲವನ್ನು ಕೆರೆಯುವುದು. ಅವಿಶಾಂತತೆ ಮತ್ತು ಸದಾ ಮಲಗಿರುವುದು, ಬಾಲವನ್ನು ಮೇಲೆತ್ತಿಕೊಂಡಿರುವುದು ಮತ್ತು ಬೆನ್ನಿನ ಹಿಂತುದಿಯು ಉಬ್ಬಿರುವುದು ಮುಂತಾದ ಚಿನ್ಹೆಗಳಿರುತ್ತದೆ.
- ಮರಿ ಹಾಕುವ ಮುನ್ನ ಆಡು ಒದರುವುದು ಮತ್ತು ಗಾಬರಿಯಾದಂತೆ ಇರುವುದು, ಮಲಗುವುದು ಮತ್ತು ಏಳುವುದು ಮಾಡುವುದು. ಕೆಚ್ಚಲು ಬಿಗಿದಂತೆ ಕಾಣುವುದು, ಬಾಹ್ಯ ಜನನೇಂದ್ರಿಯದಿAದ ಸ್ವಲ್ಪ ಹಳದಿ ಬಣ್ಣದ ಲೋಳೆ ಬರುವುದು, ಆಗ ಈಯುವ ಕ್ರಿಯೆ ನಡೆಯುತ್ತದೆ.
- ಇದೇ ಸಮಯದಲ್ಲಿ ಹಲವಾರು ಬಾರಿ ಮಲಗಿ ಎದ್ದು ಪ್ರಸವದೇದನೆ ಮಾಡಿ ಮರಿಯನ್ನು ಹಾಕುತ್ತದೆ.
- ಗರ್ಭಕೊರಳು ತೆರೆದುಕೊಳ್ಳಲು 4 ಘಂಟೆಗಳ ಕಾಲಾವಕಾಶ ಬೇಕು. ಮುಂದಿನ ಒಂದು ಘಂಟೆಯಲ್ಲಿ ಮರಿಗಳ ಜನನವಾಗುತ್ತದೆ. ಮರಿಗಳನ್ನು ಆವರಿಸಿರುವ ನೀರಿನ ಚೀಲವು ಒಡೆದ ನಂತರ 30 ನಿಮಿಷಗಳೊಳಗಾಗಿ ಮರಿಗಳು ಗರ್ಭಕೋಶದಿಂದ ಹೊರಬರಬೇಕು. ಎರಡು ತಾಸಿನ ಅವಧಿಗಿಂತ ಹೆಚ್ಚು ವಿಳಂಬವಾದರೆ ಪಶುವೈದ್ಯರ ನೆರವನ್ನು ಪಡೆದುಕೊಳ್ಳಬೇಕು. ಮಾಸು ಅಥವಾ ಸತ್ತೆಯ ಕಳಚಿ ಹೊರಬರಲು 12 ರಿಂದ 18 ಘಂಟೆಗಳ ಕಾಲಾವಕಾಶಬೇಕು.
- ಮರಿ ಹಾಕಿದ ನಂತರ ಆಡುಗಳು ಮತ್ತೆ 2 ರಿಂದ 3 ತಿಂಗಳ ಅವಧಿಯಲ್ಲಿ ಬೆದೆಗೆ ಬರುತ್ತವೆ. ಈ ಸಮಯದಲ್ಲಿ ಪುನ: ಗರ್ಭಧಾರಣೆ ಮಾಡಿಸಬೇಕು.
- ಆಡುಗಳ ಒಮ್ಮೊಮ್ಮೆ ಎರಡು ಇಲ್ಲವೇ ಮೂರು ಮರಿಗಳನ್ನು ಹಾಕುವುದುಂಟು. ಮೊದಲನೇ ಮರಿ ಹಾಕಿದ 15-20 ನಿಮಿಷಗಳಲ್ಲಿ ಉಳಿದ ಮರಿಗಳನ್ನು ಹಾಕುತ್ತವೆ.
- ಮರಿ ಹಾಕಿದ ಮೇಲೆ ಮಾಸ ಬೀಳುತ್ತದೆ, ಅದನ್ನು ದೂರ ಸಾಗಿಸಬೇಕು. ಕೆಲವು ವೇಳೆ 8 ರಿಂದ 12 ತಾಸಿನರೆಗೂ ಮಾಸ ಬೀಳದಿದ್ದರೆ ಪಶುವೈದ್ಯರ ಸಹಾಯ ಪಡೆಯಬೇಕು.
ಗಬ್ಬದ ಆಡುಗಳ ಪೋಷಣೆ:
ಗಬ್ಬದ ಆಡುಗಳಲ್ಲಿ ಗರ್ಭಾವಧಿಯ 100 ದಿನಗಳ ನಂತರ ಭ್ರೂಣದ ಬೆಳವಣಿಗೆಯು ತ್ವರಿತಗತಿಯಲ್ಲಿರುತ್ತದೆ. ಅದ್ದರಿಂದ, ಹೆಚ್ಚುವರಿ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒದಗಿಸಬೇಕು. ಅಗತ್ಯಕ್ಕೆ ತಕ್ಕಂತೆ ಪೋಷಕಾಂಶಗಳನ್ನು ಒದಗಿಸದಿದ್ದರೆ, ಆಡಿನ ಶರೀರವು ಕ್ಷೀಣಿಸತೊಡಗುತ್ತದೆ. ಸಾಕಷ್ಟು ಹಸಿರು ಮೇವಿನೊಂದಿಗೆ ದಿನಕ್ಕೆ ಎರಡು ಹೊತ್ತಿನಂತೆ 250 ರಿಂದ 300 ಗ್ರಾಂ ಸಿದ್ದಾಹಾರ ಮಿಶ್ರಣವನ್ನು ಕೊಡಬೇಕು. ಲವಣಾಂಶ ಮಿಶ್ರಣವು ಹೇರಳವಾಗಿ ದೊರೆಯುವಂತಿರಬೇಕು. ಗಬ್ಬದ ಆಡುಗಳಿಗೆ ಬೇಕಾದ ದಾಣಿ ಮಿಶ್ರಣವನ್ನು ಕೋಷ್ಟಕದಲ್ಲಿ ತಿಳಿಸಿರುವಂತೆ ವಿವಿಧ ಪದಾರ್ಥಗಳನ್ನು ಬೆರೆಸಿ ತಯಾರಿಸಬಹುದು.
| ಘಟಕಗಳ ಪ್ರಮಾಣ ( 100ಕಿ.ಗ್ರಾ) |
ಸಸಾರಜನಕ ಶೇ |
| ಮಾದರಿ 1 |
ಮಾದರಿ 2 |
ಮಾದರಿ 3 |
| ಮುಸುಕಿನ ಜೋಳದ ನುಚ್ಚು |
37 |
35 |
32 |
| ತೋಕ ಗೋಧಿ/ಓಟ್ಸ |
34 |
32 |
29 |
| ಗೋಧಿ ಬೂಸ |
16 |
14 |
15 |
| ಎಣ್ಣೆಕಾಳು ಹಿಂಡಿ |
9 |
15 |
20 |
| ಕಾಕಂಬಿ |
2.5 |
2.5 |
2.5 |
| ಲವಣ ಮಿಶ್ರಣ |
0.50 |
0.50 |
0.50 |
| ಡೈ ಕ್ಯಾಲ್ಸಿಯಂ ಫಾಸ್ಫೇಟ್ |
0.50 |
0.50 |
0.50 |
| ಜೀವಸತ್ವ ಎ, ಡಿ, ಇ ಮಿಶ್ರಣ |
0.50 |
0.50 |
0.50 |